Arif Raja: Translation from Kannada

Arif Raja
Arif Raja is a premier Kannada poet. He was born in Arakera village, located in Raichur district of Karnataka, India. He has published five collections of poems so far: Saitanana Pravadi (A Prophet of Satan, 2006), Jangama Phakeerana Jolige (The Satchel of a Mendicant Faqir, 2009) and Benkige Todisida Batte (A Raiment for Fire, 2013) Nakshatra Moha (Star Infatuation, 2017) and Ede Halina Pali (The Turn of Breastfeeding, 2022). Arif Raja has been awarded Yuva Puraskara of Indian Academy of Letters-2012. His poems have been translated to various languages including English, Persian, Albanian and Spanish. The process is on to publish his poems translated to English under the title ‘I am a Public Lavatory’.
Mobile: + 91 9019893784

When I feel I am losing my communication with myself, I start writing poems. Poetry is not only a commotion outside my existence but also a commotion inside me, because losing communication with myself means losing communication with the world around me. In this wide world, to say that I also exist, to record my presence, my only medium is poetry or poems - Arif Raja

Cover Pages of Arif Raja’s Poetry Collections:

The Satchel of a Mendicant Faqir, 2009

A Raiment for Fire, 2013

Star Infatuation, 2017

The Turn of Breastfeeding, 2022



ನೀನು ರೆಪ್ಪೆ ಬಡಿದಾಗೊಮ್ಮೆ
ನೀನು ರೆಪ್ಪೆ ಬಡಿದಾಗೊಮ್ಮೆ
ನನ್ನ ಹೃದಯದ ದೀಪ
ಆರಿ ಹೊತ್ತಿಕೊಳ್ಳುವುದು

ನೀನು ನಿದ್ದೆಗೆ ಜಾರದಂತೆ
ಈಗ ಯಾರು
ಕಾವಲು ಕಾಯಬೇಕು?

ನಿನ್ನ ಹೆತ್ತಮ್ಮ
ಮತ್ತೊಮ್ಮೆ
ನಿನ್ನನೇ ಗರ್ಭಧರಿಸುವ
ಹೊತ್ತು ಬಂತು

ಗಡಿ ತಂಟೆ ಮುಗಿಯಬಹುದು
ತಡೆಯೊ‌ ಕಂದ

ಸುಗಂಧ ಸೂಸುವ
ಗೋರಿಯಿದು

ಯಾರೇಕೆ 
ಲಾಲಿ ಹಾಡಬೇಕು!

       
EACH TIME YOU BLINK

Each time you blink,
my heart’s lamp
is put out and rekindled 
Who should keep a watch
to ensure
that you don’t slip into sleep?
A time has come 
for your mother
to bear you again
in her womb.

The border wars may end soon,
please wait, my child.

This is a fragrant
grave,
why should anyone sing
lullabies here?

-Translated by: Kamalakar Kadave
------------------------------------------------------------------------------------

ನಕ್ಷತ್ರ ಮೋಹ - ೧

ನನ್ನ ಕಣ್ಣ ಮುಂದೆ 
ನಕ್ಷತ್ರ ನರ್ತಿಸುತ್ತದೆ
ಒಂದು ಕೊಕ್ಕರೆಯ ಹಾಗೆ
ಅದೆಷ್ಟೋ ಊರುಕೇರಿಗಳ ದಾಟಿ 
ಕಾಡುಮೇಡುಗಳ ಅಲೆದು
ನನ್ನ ಮೇಲೆ ಕಣ್ಣಿಟ್ಟು
ಹಿಂಬಾಲಿಸುತ್ತದೆ ಅದು
ಸಾಕು ಬೆಕ್ಕಿನ ಹಾಗೆ ಮುದ್ದಾಗಿ

ಇಳಿಸಂಜೆಯಲ್ಲಿ
ಹೀಗೆ ಬೆನ್ನುಹತ್ತಿರುವ ನಕ್ಷತ್ರಕ್ಕೆ
ಅವಳ ಹೆಸರಿಡೋಣವೆಂದುಕೊಳ್ಳುತ್ತೇನೆ
ಏನೋ ದಿಗಿಲಾಗಿ
ಕಾರಿರುಳು ಕಸದ ತೊಟ್ಟಿಯಲ್ಲಿ
ಯಾರೋ ಬಿಸಾಡಿ ಹೋದ
ನಿಷ್ಪಾಪಿ ಕೂಸೊಂದರ ಕಣ್ಣುಗಳು ನೆನಪಾಗುತ್ತವೆ

ಕತ್ತೆತ್ತಿ ನೋಡುತ್ತೇನೆ
ಬಾನ ತೊಟ್ಟಿಲ ತುಂಬ ಲಕ್ಷ ನಕ್ಷತ್ರಗಳು 
ತಂದೆತಾಯಿಗಳಿಲ್ಲದ ತಬ್ಬಲಿ ಕೂಸುಗಳು

ಇದು ಯಾವ ಜನ್ಮದ ಕನಸೊ
ನಾ ಹೋದಲೆಲ್ಲಾ ಹಿಂದೆ ಬಂದಿದೆ
ಒಂದು ಒಂಟಿ ನಕ್ಷತ್ರ
ಅನಾಥ ಮಗುವಾಗಿ





STAR INFATUATION-1 

In front of my eyes
Dances a star
Like a crane

Crossing towns and cities
Wandering through forests,
Its eyes set always on me,
It follows me
Lovingly 
Like a pet cat

I want to name after her
The star that follows me at sundown

Suddenly afraid,
I remember the innocent eyes
Of a baby dumped
In the dung heap
Of the dark night 

I look up 
At the sky—
A cradle of a million stars,
Orphaned, all of them

Is it a dream forgotten
From a life long ago?
It follows me 
Wherever I go
A lone star
Like an orphaned child

-Translated by: H S SHIVAPRAKASH


ನಕ್ಷತ್ರ ಮೋಹ -೩೭
 
ನಿನ್ನ ಹಾಸಿಗೆಯಲ್ಲಿ ನಿನ್ನದೇ ಜೊತೆ
ಸಾವೂ ಮಲಗಿರುತ್ತದೆ
ಅದನ್ನು ಎಚ್ಚರಿಸದಿರು
 
ಜೋತಿರ್ವರ್ಷಗಳಾಚೆಗಿನ
ನಕ್ಷತ್ರದ ಹಾಗೆ ಸ್ವಪ್ನ
ಹಗಲು ವೇಷಧಾರಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತದೆ
 
ನಿನ್ನನ್ನು ಹುಡುಕಿಕೊಂಡು ಬರುವವರೆಗೂ
ಕಾಯಬೇಕು!


STAR INFATUATION 37 

Death also sleeps 
With you in your bed
Don’t wake it up

Like a star light years away
At times the dream
In the guise of the day
Appears
And comes 
Looking for you

Good to wait 
Till then

-Translated by: H S SHIVAPRAKASH

---------------------------------------------------------------------------------------







ನಕ್ಷತ್ರ ಮೋಹ- ೪೦*
 
ಆ ನಕ್ಷತ್ರ
ನನ್ನ ಹೃದಯ
ಯಾವಾಗಿನಿಂದಲೋ ಬಡಿದುಕೊಳ್ಳುತ್ತಿದೆ.
 
ಈ ಬೆಳದಿಂಗಳು
ನನ್ನ ರಕ್ತ
ಮೈಯಲ್ಲಿ ಇನ್ನೂ ಹರಿಯುತ್ತಿದೆ
 
ಯಾರೋ ಆಡಿಬಿಟ್ಟ ಪಿಸುಮಾತು
ಗಾಳಿಯ ರಹಸ್ಯ ಗಂಟುಗಳ ಬಿಚ್ಚುತಾ
ನನ್ನವರೆಗೂ ಬಂದು ತಲುಪಿತೆ?
 
ಯಾವ ಕಲ್ಲುಬಂಡೆಗಳ ಹಿಂದೆ
ಅಡಗಿ ಕುಂತಿತ್ತು ಈ ಮೌನ
ನನ್ನ ಕಣ್ಣಿಂದ ಈಗ ಜಿನುಗುತ್ತಿದೆ
 
ನನ್ನ ನಿನ್ನ ಹೆಸರಿನ
ಪಣತಿಯನು ಹಚ್ಚಿ
ತೇಲಿ ಬಿಟ್ಟವರಾರು
ಅನಂತತೆಯಲಿ..
 
ಬರಿಯ ನೋಟದಲೇ
ಬಸಿರು ಮಾಡುವ
ಆ ಸಂಕಲ್ಪ ಬಲಕ್ಕೆ ಶರಣೆಂಬೆ
 
ಯಾವ ದೇವ ನುಡಿಯು
ಗೊತ್ತಿಲ್ಲ ನನಗೆ
 
ನನಗೆ ಗೊತ್ತಿರುವುದಿಷ್ಟೆ
ಒಂದು ಮುತ್ತಿನ ಭಾಷೆ
ಒಂದು ತುತ್ತಿನ ಭಾಷೆ
ಒಂದು ಹೊತ್ತಿನ ಭಾಷೆ
 
ಅಷ್ಟೇ!

STAR INFATUATION 40 

That star~ 
my heart~
Has been beating 
I don’t know since when

The moonlight
- my blood~
Has still been flowing 
In my body 

Have the whispers
Somebody spoke 
Reached me
Releasing knots of air?

The silence
Hidden behind which rock
Is oozing through my eyes?

Who lit up the lamp 
That is in our name 
And let it float
In eternity?

I bow down 
To the power of that will
Strong enough
To impregnate through looks

I know 
No gospel

All I know is the language of 
A kiss
A mouthful
A time

-Translated by: H S SHIVAPRAKASH

---------------------------------------------------------------------------------


ನನಗಿಂತ ಮೊದಲು

ನನಗಿಂತ ಮೊದಲು ಕತ್ತಲು ಹುಟ್ಟಿತು 
ಅದಕ್ಕೆ ಸಾವು ಎಂದು ಕೂಗಲಾಯಿತು

ನನಗಿಂತ ಮೊದಲು ಬೆಳಕು ಹುಟ್ಟಿತು
ಅದಕ್ಕೆ ಸೂರ್ಯ ಎಂದು ನಮಿಸಲಾಯಿತು

ನನಗಿಂತ ಮೊದಲು ಪ್ರೀತಿ ಹುಟ್ಟಿತು 
ಅದಕ್ಕೆ ಭೂಮಿ ಎಂದು ಪೂಜಿಸಲಾಯಿತು

ನನಗಿಂತ ಮೊದಲು ನನ್ನ ಕಣ್ಣೀರು ಹುಟ್ಟಿತು 
ಅದಕ್ಕೆ ಕವಿತೆ ಎಂದು ಹೆಸರಿಡಲಾಯಿತು

BEFORE I WAS

Darkness was born before I was,
It was called death.

Light was born before I was,
It was revered as the sun.

Love was born before I was,
It was worshipped as the earth.

My tears were born before I was,
It was called a poem.


                                              -Translation: Manu V Deva Devan
---------------------------------------------------------------------------------------

ಮಣ್ಣು

ಆಗ ನಾವು ಮಣ್ಣು ತಿನ್ನುತ್ತಿದೆವು 
ನಮ್ಮ ತಂದೆ ತಾಯಿಗಳು ನಮ್ಮನ್ನು ತಡೆಯಲಿಲ್ಲ
ಈಗ ನಮ್ಮಮಕ್ಕಳು ಮಣ್ಣು ತಿನ್ನುವುದ ತಪ್ಪಿಸಿದೆವು

ಮುಂದೆ ಖಂಡಿತ ಅವರು 
ನಮ್ಮ ಮಣ್ಣು ಮುಕ್ಕಿಸಲಿದ್ದಾರೆ..


DIRT

Back then, we fed on dirt.
Our parents didn’t stop us.
We’ve now stopped our kids
From eating dirt.
One day,
They’ll cast us into the dirt for sure.
                                              -Translation: Manu V Deva Devan
-----------------------------------------------------------------------------------------
ಬುದ್ಧನೆಂದರೆ...

ಬುದ್ಧನೆಂದರೆ
ತಳವಿರದ ತತ್ರಾಣಿ
ಕ್ಷಣ ಕ್ಷಣ ತುಂಬುತ್ತಲೇ
ಕ್ಷಣ ಕ್ಷಣ ಬರಿದಾಗುತ್ತಲೇ 
ಇರುವ

ಬುದ್ಧನೆಂದರೆ
ಮಾಂಸದಂಗಡಿಯಲಿ‌ ಕಡಿದಿಟ್ಟ
ಕುರಿಯ ರುಂಡ ಮತ್ತದರ
ಕಣ್ಣಗೋಲಿಯಲಿ ಸೆರೆ ಸಿಕ್ಕ
ಕಸಾಯಿಯವನ ಅಸಹಾಯಕ ಚಿತ್ರ

BUDDHA MEANS…
Buddha means:
A bottomless watercan;
Filled up and emptied
Every second
Buddha means:
The severed head of a goat
in the slaughterhouse
And
The image of the helpless butcher
imprisoned in its eyes...
-Translation: H S SHIVAPRAKASH
---------------------------------------------------------------------------

ನಡು ರಾತ್ರಿಯ ತುಟಿಗೆ ಯಾವ ಬಣ್ಣ?*

ದಿನಕ್ಕೆರಡು ಸರ್ತಿ ತಪ್ಪದೇ ತಲೆ ಸ್ನಾನ ಮಾಡುವ ಇವಳು
ಇದ್ದಕ್ಕಿದ್ದಂತೆ ನಡು ರಾತ್ರಿ ಎದ್ದು
ತುಟಿಗೆ ಲಿಪ್ ಬಾಮ್ ಸವರುತ್ತಾಳೆ
ಏನೋ ನೆನಪಾದವಳಂತೆ
ಮತ್ತೆ ನೋಡಿಕೊಳ್ಳುತ್ತಾಳೆ
ದೈನ್ಯತೆಯೋ ದುಗುಡವೋ ಪ್ರತಿಭಟನೆಯೋ
ಖಾಯಿಲೆಯೋ
ಮತ್ತೆ  ಮತ್ತೆ ಕಣ್ಣಕನ್ನಡಿಯನು ದುರುಗುಟ್ಟುತ್ತಾಳೆ
ಕಡು ಗೆಂಪು,ಗುಲಾಬಿ,ಬೂದು‌ ನೀಲಿ
ಥರಾವಾರಿ ಬಣ್ಣಗಳ ಝಳಪಿಸಿ
ತುಟಿಗೆ ಲಿಪ್ ಬಾಮ್ ಸವರುತ್ತಾಳೆ

ಅವಳ ಅನಂತ ಸ್ನಾನವೂ ಕೂಡ ಹೆಚ್ಚು ಕಮ್ಮಿ
ನಿತ್ಯ ಹೀಗೆಯೇ ಜರುಗುತ್ತದೆ
ಭೂಮಿಯನು ಮೀಯಿಸುವ
ಅಂತಿಮ ಕ್ರಿಯಾವಿಧಿಯಂತೆ
ಹೇಳದೇ ಕೇಳದೇ ಬಂದು ಅಪ್ಪಳಿಸುವ
ಚಂಡ ಮಾರುತದಂತೆ
ಯಾವ ಋತುವಿನ ಋಣವೂ ಶಾಶ್ವತವಲ್ಲ
ಇವತ್ತಿನ ಉಸಿರು ಇವತ್ತಿನದೇ ಎಂಬಂತೆ!


WHAT’S THE COLOUR OF THE MIDNIGHT’S LIPS?
Twice a day, invariably, she goes for a shower. 
She rises in the midnight out of the blue
To wear her lip balm.
She looks again;
There’s something she calls to her mind—
Helplessness, anxiety, protest, disease.
She stares, again and again, at the mirror in the eyes,
Flashes a variety of colours—
Deep red, rose, ash blue—
And wears her lip balm.
Her endless bath also occurs 
In much the same way, day after day,
Like the last rites of bathing the earth,
Like the storm that makes an abrupt landfall.
Every season is grateful like today’s breath.
They’re for today; they won’t last forever.

                                              -Translation: Manu V Deva Devan

ಆ ಅಳು ಈಗಲೂ ಅಲ್ಲಿ


ಆ ಅಳು ಈಗಲೂ ಅಲ್ಲಿಪಾಟಿಯ ಮೇಲೆ ಅ ಆ ಇ ಈ ತೊದಲು ನುಡಿವ 
ಮಗುವಿನ ಮುಪ್ಪಿನ ಸಂಕೇತಗಳಂತೆ
ಮಾನವಕುಲದ ಪ್ರಾಥಮಿಕ ಕಲಿಕೆಯಾಗಿ 
ಆ ಅಳು ಈಗಲೂ ಅಲ್ಲಿ
ಆ ಶ್ವೇತ ಕರವಸ್ತ್ರದಲ್ಲಿ
ಮೆರವಣಿಗೆ ಹೊರಟ ಕಾಲುಗಳ ಚಲನೆಯಲ್ಲಿ

ಬೇಕಾದರೆ
ಅಪ್ಪನಿಗಾದರೂ ಹೇಳಬಹುದು
ಅಮ್ಮನಿಗಾದರೂ ಕೇಳಬಹುದು
ದೇವರಿಗೇ ದಬಾಯಿಸಬಹುದು

ಆ ಅಳು
ನಾಗರಿಕತೆಯ ಬೆಂಕಿಯೊಂದಿಗೆ ಹುಟ್ಟದಂತಿದೆ 
ಎಷ್ಟೊಂದು ಪ್ರವಾಹ ಬಿರುಗಾಳಿಗಳ ಹಾದು ಬಂದಿದೆ 
ರಹಸ್ಯಕ್ಕೆ ಚಿಪ್ಪೊಡೆದು ರಹಸ್ಯ ಸಂಭವಿಸುವ ಹಾಗೆ 
ಆ ಅಳು ಈಗಲೂ ಅಲ್ಲಿ
ಪುರಾತನ ವೃಕ್ಷದ ಬೀಜದೊಳಗೆ 
ಇಮಾರತು ನಡುಗುವ ಹಕ್ಕಿಯ ಹಿಕ್ಕೆಯಾಗಿ

ಜಗತ್ತಿಗೆ ಕಾಲಿಟ್ಟ ತಕ್ಷಣವೇ
ಬೋರಾಡಿ ಅಳುವ ಈ ಎಳೆಯ ಪ್ರೇತ ಮತ್ತೆ ನೆಲೆಯಿಲ್ಲದೆ
ಅಲೆಮಾರಿಯಾಗಿ ಕಳೆದುಹೋಗುವ ಮುನ್ನ 
ಸಾವಿರ ಕಣ್ಣುಗಳ 
ಅಳುವಿನ ಮುಖ ನೆನಪಾಗುವುದು

ಅಳುವಿನ ಧ್ಯಾನ
ಒಣಗಿದ ಹಲ್ಲಿಯ ಗೋಡೆಮಾತುಗಳಂತೆ 
ರಾತ್ರಿಗಳ ಸುಟ್ಟು ಲೇಪಿಸಿಕೊಂಡ ಗಂಧವಾಗುತ್ತದೆ 
ಮತ್ತೊಂದು ಸೂರ್ಯೋದಯಕ್ಕೆ ಸಜ್ಜಾಗುತ್ತದೆ

ದೇವರು ದೊಡ್ಡವನು
ನಿತ್ಯದ ನೀರಸದಲ್ಲೂ ನಮಗೆ ಗೊತ್ತಿಲ್ಲದಂತೆ ಆಗಾಗ 
ಬಹುಮಾನಗಳನ್ನಿಟ್ಟಿರುತ್ತಾನೆ 
ಆ ಅಳು ಆಲಿಸಲು ಕೆಲವೊಬ್ಬರಿಗಾದರೂ 
ಕಿವಿಗಳನ್ನು ಕೊಟ್ಟಿರುತ್ತಾನೆ


THAT CRY, THERE, EVEN NOW. 

That cry resonates now too.

As the signs of the baby’s old age 
That turns the lisps of alphabet upon a slate
Into the first howl of Mankind. 
That cry is a cry now too
Manifest in the white kerchief
In the marching feet, In a Procession 

One may advise Dad
Or ask Mom;
May challenge God! 

Have been born with the fire of civilisation. 
How many floods and storms has it survived! 
Like an enigma winging forth from an enigma. 
That cry can be heard now too.

That cry
Seems to 
Like a bird’s dropping hidden in the seed 
Of an ancient tree that will shake the mansion.

I recollect the weeping face
With a million eyes
Before the tender spectral babe that cries upon its stomach 
Nascent upon this universe
Would homeless, wandering, lose itself.

The meditation of crying
Prepares for yet another dawn 
Like the smear of dry and fading graffiti
Turned paste from burnt nights.

God is supreme.
He often secrets gifts 
Unbeknownst to us even in this daily ordinariness.
He bestows ears
To a few at least to audition that cry.

-Translation: Ravichandra P Chittampalli

------------------------------------------------------------------------------

ಈ ಶಹರಕೆ ಬಂದಿಳಿದ ಮತ್ತೊಬ್ಬ ಹುಚ್ಚ

ಗೌಜಿಗದ್ದಲದ ಹಿರೆಚೌಕದಲಿ
ಹಾರುವುದ ಮರೆತು ಕೊಕ್ಕರೆಯೊಂದು
ದಿಕ್ಕೆಟ್ಟು ನಿಂತಹಾಗೆ

ಈ ಬಿಸಿಲ ಮದ್ಯಾಹ್ನ
ಈ ಶಹರಕೆ ಬಂದಿಳಿದ
ಮತ್ತೊಬ್ಬ ಹುಚ್ಚ 

ಸ್ವರ್ಗದಿಂದ ಹೊರದಬ್ಬಿದ ಮೇಲೆ
ಬೀದಿ ನಾಯಿಗಳ ಬಾಯಿಗೆ
ಸಿಕ್ಕ ಮುದ್ದು ಮೊಲವಾಗಿ
ಅವನ ಆತ್ಮ

ತನ್ನೊಳಗೇ ಮುರಿದು ಬೀಳುವ
ತನ್ನೊಳ ಸದ್ದಿಗೆ ಕಿವಿಗೊಟ್ಟು
ನಿಂತೇ ಇದೆ ಒಂಟಿಗಾಲಲಿ
ಏಕವಾಗಿ
         ಅನೇಕವಾಗಿ
                       ತಾನೇ ತಾನಾಗಿ

ಬಹುಷಃ   ಗೊತ್ತಿರಲಾರದು
ಈ ಶಹರದ ಜನರಿಗೆ 
ಎಲ್ಲಿಂದಲೋ ಹಾರಿ ಬರುವ
ಶಾಪಗ್ರಸ್ತ ಗಂಧರ್ವರ
ಮೊದಲ ಸೂಚನೆ ಸಿಗುವುದು

ಮಧ್ಯರಾತ್ರಿಯಲಿ ಮೈ ಮುರಿಯುತ್ತಾ
ಗೋರಿಯಿಂದ ಎದ್ದು ಬರುವ
ಈ ಶಹರದ ನಿಶಾಚರ ಜೀವಗಳಿಗೆ

ಬಹುಷಃ ಇದೂ ಗೊತ್ತಿರಲಾರದು
ಈ ಶಹರದ ಜನರಿಗೆ
ಸ್ವರ್ಗದಿಂದ ಉಚ್ಛಾಟನೆಗೊಂಡ ಹುಚ್ಚನಿಗೆ 
ಅತ್ತಿಯ ಹಣ್ಣು ಕೊಟ್ಟು ಸ್ವಾಗತಿಸಲು ಹೋಗಿ
ಈ ಲೋಕದ ಮತ್ತೊಬ್ಬ ಕವಿ
ಏನಾಗಿ ಹೋದ ಎಂಬುದು

ANOTHER MADMAN'S ARRIVAL TO THE CITY

Like a crane
rendered flightless 
in bewilderment 
at a noisily busy city square,
another madman 
has arrived in the city
on this hot afternoon. 
His soul,
a cute rabbit out of its haven,
preyed by vicious street dogs,
stands alone,
enacts many others,
and returns to self,
listening to its own inner voice
that keeps collapsing within.  

Perhaps the citizens
of this city
do not know that
the nightly beings
emerging in the mid of the night
from the city's graves
get the earliest signs 
of the arrival of the damned angels,
flying in from nameless places. 

Perhaps the citizens 
of this city
also do not know 
what befell the other poet of this world
who went out with a fig to welcome 
the mad man 
expelled from heaven
-Translation: Kamalakar Kadave
--------------------------------------------------------------------------------------------

ಪ್ರಳಯ ಸುಖ

ಕೊಡೆಯಂತೆ ಬಿಡಿಸಿ ಅವಳು ಕೆಂಪು ಲಂಗವ
ಬಟಾಬಯಲಿನಲಿ ಉಚ್ಚೆ ಹೊಯ್ಯಲು ಕುಂತಳು

ಬಹುಶಃ ಧರ್ಮಗ್ರಂಥಗಳಲಿ 
ದೇವರು ಬರೆದು ಕಳಿಸಿದ
ಅಂತಿಮ‌ ಪ್ರಳಯದ ಸಂದೇಶ
ಇಂದೇ ಬಂದಿರಬೇಕು
  

DELECTABLE DELUGE

She unfurled her red petticoat
Like an umbrella
And sat down to pee
In a public place
The message
About the ultimate doomsday
That God wrote in Holy Scriptures
May have arrived
Just today.

-Translated by: H S SHIVAPRAKASH

-----------------------------------------------------------------------------


ಚೆ-

ಆ ಹರೆಯದ ಹುಡುಗನ
T-ಶರ್ಟಿನ ಮೇಲೆ ಚಿತ್ರವಾಗಿದ್ದಾನೆ ಚೆ ಗುವೇರ

ಅಂಗೈಗನ್ನಡಿಯಲಿ ಅಶ್ಲೀಲ ಸಿನಿಮಾಗಳನ್ನು ಸೆರೆಹಿಡಿದು
ಹಸ್ತಮೈಥುನ ಮಾಡಿಕೊಳ್ಳುವ 
ದಿನಾ ಸಂಜೆ ಪಬ್ಬಿನಲಿ
ಸಿಗದ ಹುಡುಗಿಯರನು ನೆನಸಿಕೊಂಡು 
ಬಿಯರ್ ಬುರುಗಿಸುವ 
ಸರ್ಕಾರಿ ಉದ್ಯೋಗಕ್ಕಾಗಿ ನೂರಾರು ಅರ್ಜಿ ಹಾಕಿ 
ಪರೀಕ್ಷೆಯಲಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವ
ಆ ಹಸಿಹುಡುಗನ ಅಂಗಿಯ ಮೇಲೆ

ಮಿಲಿಟರಿ ಕ್ಯಾಪು ಧರಿಸಿ ಸೊಟ್ಟಬಾಯಲಿ ಸಿಗಾರು ಸುಡುವ ಚೆ ಗುವೇರ 
ಬಲಗೈ ಸುತ್ತಿಗೆ ಮಾಡಿ ಘೋಷಾ ವಾಕ್ಯವನು ಆಕಾಶಕೆ 
ಗುಮ್ಮುವ ಚೆ ಗುವೇರ 
ಹೋರಾಟದ ಸಾವಿರಾರು ನದಿಗಳನ್ನು     
ಸಂಬೋಧಿಸಿ ಭೋರ್ಗರೆಯುವ ಚೆ ಗುವೇರ
ಆ ಟಿನೇಜ್ ಪೋರನ
T-ಶರ್ಟಿನ ಎದೆಯ ಮೇಲೆ ಕಪ್ಪುಬಿಳುಪಿನ ಚಿತ್ರಗಳಾಗಿ

ಎತ್ತರೆತ್ತರದ ಮರಪರ್ವತಗಳನೇರಿ ರಣಹದ್ದುಗಳನ್ನು 
ಕವಣಿ ಬೀಸಿ ಕೆಡವುತ್ತಿದ್ದ 
ಆ ರೊಮ್ಯಾಂಟಿಕ್ ಕ್ರಾಂತಿಕಾರಿಯ ಕ್ಷಯಪೀಡಿತ 
ಎದೆಗೂಡಿನಲ್ಲಿ ಏನಿತ್ತೋ 
ನೆರೂದನ ಕೊನೆಗಾಲದ ಕವಿತೆಯ ಮಿಂಚು ಅವನ ಕಣ್ಣಲ್ಲಿತ್ತೆ…

ನನಗೆ ನೆನಪಾಗುತ್ತಿದೆ
ಬೊಲಿವಿಯಾದ ವಿಮೋಚನೆಗಾಗಿ ಕೋವಿಯನು 
ಹೆಗಲಿಗೇರಿಸಿಕೊಂಡು 
ಸಂಗಾತಿಗಳೊಂದಿಗೆ ಬೇಟೆಯಾಡಲು ಹೋಗಿದ್ದ ಗೆರಿಲ್ಲಾ ಗುರು
ದಟ್ಟಕಾಡಿನಲಿ ಕಾಡುಹಂದಿಯ ಹಾಗೆ ಬೇಟೆಯಾಗಿದ್ದು
ಮತ್ತೆ ಆ ಊರಿನ ಶಾಲೆಯೊಂದರಲಿ 
ಅವನ ಶವವನು ಸಾರ್ವಜನಿಕ ವೀಕ್ಷಣೆಗೆ ಇಟ್ಟಿರುವುದು
ಸಾಲುಗಟ್ಟಿ ಅಭಿಮಾನಿಗಳು ಅವನ ಕಳೇಬರದ ಸನಿಹಕೆ ಬರುತ್ತಿದ್ದಂತೆ
ನೋಡನೋಡುತ್ತಲೇ ಪಾಪ ಮೂಗು
ಮುಚ್ಚಿಕೊಂಡು ದಾಟಿ ಹೋಗುತ್ತಿರುವುದು

ಏಕೆಂದರೆ ಕಣ್ಣು ತೆರೆದು ಮಲಗಿದ 
ಚಿರತೆಯ ಕಣ್ಣಲ್ಲಿ ಕಣ್ಣಿಟ್ಟು ನೋಡುವ 
ಏಳುಗುಂಡಿಗೆ ಯಾರಿಗೂ ಇಲ್ಲ.


CHE 

Che Guevara has become 
A picture on the young boy’s T-shirt
 
On the shirt of the juvenile one 
Who captures vulgar films in his hand 
And goes screwing with his fist 
Who sips beer in the pub every evening 
Thinking of the girls who didn’t come his way 
Who sends countless applications for government jobs 
And tries his luck in the examinations 

Che Guevara, with his military cap and burning cigar in his twisted mouth, 
Che Guevara, who strikes slogans into the skies with his hammer-like right-hand fist 
Che Guevara, who roars, addressing thousands of rivers of struggle 
Is now a black and white portrait 
On the teen-age boy’s T-shirt. 


What was in the diseased bosom of the romantic rebel 
Who scaled mighty trees and mountains 
To capture eagles with his nets? 
In his eyes was the streak found in Neruda’s last poems…

I remember the guerilla guru 
Who went hunting with his comrades 
With a rifle on his shoulders to liberate Bolivia 
Being hunted down in the thick jungle like a wild boar 
And his body being kept in a school 
In the village for the public to pay homage 
Fans arriving in queues who hold their nose 
And walk away as soon as they approach the body 



Because 
None has the guts 
to look into the eyes of a tiger 
lying with his eyes open

-Translated by: Manu V Deva Devan

***

No comments :

Post a Comment

We welcome your comments related to the article and the topic being discussed. We expect the comments to be courteous, and respectful of the author and other commenters. Setu reserves the right to moderate, remove or reject comments that contain foul language, insult, hatred, personal information or indicate bad intention. The views expressed in comments reflect those of the commenter, not the official views of the Setu editorial board. प्रकाशित रचना से सम्बंधित शालीन सम्वाद का स्वागत है।